ಕೇನ್ ವಿಲಿಯಮ್ಸನ್ (ಜನನ: ೮ ಆಗಸ್ಟ್ ೧೯೯೦) ವೃತ್ತಿಪರ ಕ್ರಿಕೆಟ್ ಆಟಗಾರ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ. ಪ್ರಸ್ತುತ ಯುಗದ ಒರ್ವ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಕರೆಯಲ್ಪಡುವ ವಿಲಿಯಂಸನ್ , ಬಲಗೈ ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕ ಆಫ್ ಸ್ಪಿನ್ ಬೌಲರ್. ಡಿಸೆಂಬರ್ 20,2016 ರಂದು ಇವರು ಟೆಸ್ಟ್ ಕ್ರಿಕೆಟ್ನಲ್ಲಿ 4ನೆಯ ಶ್ರೇಯಾಂಕಿತ ಬ್ಯಾಟ್ಸ್ಮನ್ ಆಗಿದ್ದರು. ನ್ಯೂಜಿಲೆಂಡ್ ದೇಶೀಯ ಕ್ರಿಕೆಟ್ ನಲ್ಲಿ ನಾರ್ತನ್ ಡಿಸ್ಟ್ರಿಕ್ಸ ಪರ ಮತ್ತು ಐಪಿಎಲ್ ನಲ್ಲಿ ಸನ್ರೈಸರ್ಸ ಹೈದರಾಬಾದ್, ಇಂಗ್ಲಿಷ್ ದೇಶೀಯ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಯಾರ್ಕ್ಷೈರ್ ಪರ ಆಡುತ್ತಾರೆ. == ==